ರೈತ ಬಾಂಧವರೇ ಇಂದೆ ನಿಮ್ಮ ಫೂಟ್ಸ್ ರೈತರ ಐಡಿಯನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಿಕೊಳ್ಳಿ
ಅಪ್ಲೇಟ್ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
📢 ರೈತ ಭಾಂದವರೇ, ಇಂದೇ ನಿಮ್ಮ ರೈತರ ಐಡಿಯನ್ನು(Fruits ID) ಕೇಂದ್ರ ಸರ್ಕಾರದ ರೈತ ಐಡಿಗೆ ಅಪ್ಡೇಟ್ ಮಾಡಿಸಿಕೊಳ್ಳಿ..
ರಾಜ್ಯದ ಎಲ್ಲಾ ರೈತ ಬಾಂಧವರಿಗೆ ಈ ಮೂಲಕ ತಿಳಿಯಪಡಿಸುವುದೇನಂದರೆ ಕೇಂದ್ರ ಸರ್ಕಾರದ ರೈತರ ಐಡಿ ನೀಡಲು ಕರ್ನಾಟಕ ರಾಜ್ಯ ಸರ್ಕಾರದ FID ಮತ್ತು PMK ID ಹೊಂದಿರುವ ಎಲ್ಲಾ ರೈತರು ಕಡ್ಡಾಯವಾಗಿ ಈ ಕೆಳಗೆ ತಿಳಿಸಿರುವ ಅಂಶಗಳಾದ
1. ಮೊಬೈಲ್ ನಂಬರ್ ತಿದ್ದುಪಡಿ
2-KYC
3-ರೈತರ ಫಾರ್ಮರ್ ಕನ್ಸೆಂಟ್
4. ಲ್ಯಾಂಡ್ ಡಿಕ್ಲರೇಷನ್
ಮೇಲಿನ ಈ 4 ಅಂಶಗಳನ್ನು ಕಡ್ಡಾಯವಾಗಿ/ತ್ವರಿತವಾಗಿ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ “ಆಧಾರ್ ಮತ್ತು ಆಧಾರ್ ನೊಂದಾಯಿತ ಮೊಬೈಲ್ ಸಂಖ್ಯೆ ನೀಡುವುದರ ಮುಖಾಂತರ ಮಾಡಿಕೊಳ್ಳಬೇಕೆಂದು ಈ ಮೂಲಕ ತಿಳಿಯ ಪಡಿಸಿದೆ.
ಈ ಮೇಲೆ ತಿಳಿಸಿರುವ ಅಂಶವನ್ನು ರೈತರು ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕಿರುತ್ತದೆ. ಇದು ರೈತರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ದೊರಕುವ ವಿವಿಧ ಸಹಾಯಧನಗಳಾದಪೀ ಎಂ ಕಿಸಾನ್, ಬೆಳೆ ಹಾನಿ ಪರಿಹಾರ, ಬೆಳೆ ವಿಮಾ ಮೊತ್ತ ಪಾವತಿ, ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ, ರಾಗಿ ಖರೀದಿ, ಇನ್ನೂ ಮುಂತಾದ ಸಹಾಯಧನದ ಮೊತ್ತವನ್ನು ರೈತರ ಖಾತೆಗೆ ಪಾವತಿಸಲು ಅತ್ಯವಶ್ಯಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಸಂಪರ್ಕಿಸಲು ಕೋರಿದೆ.
ವಿಶೇಷ ಸೂಚನೆ: ರೈತರು ಕೃಷಿ ಇಲಾಖೆಯ ಅಧಿಕಾರಿಗಳು/ಕೃಷಿ ಇಲಾಖೆ/ಸರ್ಕಾರದ ಇತರೆ ಇಲಾಖೆಗಳಿಂದ ನೇಮಕಗೊಂಡ ಅಧಿಕಾರಿಗಳಿಗೆ ಮಾತ್ರವೇ ಮೇಲ್ಕಂಡ ಕಾರ್ಯಕ್ಕೆ, ‘ಆಧಾರ್ OTP ಯನ್ನು ನೀಡಬಹುದಾಗಿರುತ್ತದೆ. OTP ದುರುಪಯೋಗದ ಬಗ್ಗೆ ಜಾಗೃತರಾಗಿರಲು ಕೋರಿದೆ.
2 thoughts on “ರೈತ ಐಡಿ (FID) KYC ಅಪ್ಡೇಟ್ ಕಡ್ಡಾಯ – ಮೊಬೈಲ್ NUMBER, KYC, ಲ್ಯಾಂಡ್ ಡಿಕ್ಲರೇಷನ್ ಕಡ್ಡಾಯ”
ok